Tuesday, December 1, 2009

30.11.2009

(Janardan Kodavoor)
ಚಿಟ್ಪಾಡಿ: ಸೈಂಟ್ ಮೇರಿಸ್ ಐಟಿ‌ಐಯ ಬೆಳ್ಳಿಹಬ್ಬ ಉದ್ಘಾಟನೆ: ಬೆಂಗಳೂರಿನಲ್ಲಿ ಟೊಯೊಟ ಘಟಕ ಸ್ಥಾಪನೆ: ಡಾ.ಆಚಾರ್ಯ: ಉಡುಪಿ, ನ.೩೦: ಅಂತಾರಾಷ್ಟ್ರೀಯ ಖ್ಯಾತಿಯ ಟೊಯೊಟ ಕಂಪೆನಿಯು ಬೆಂಗಳೂರು ಹೊರವಲಯದಲ್ಲಿ ಸುಮಾರು ೨ ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆ ಮಾಡಿ ಹೊಸ ಕಾರು ತಯಾರಿಕಾ ಘಟಕ ಸ್ಥಾಪನೆಗೆ ಮುಂದಾಗಿದೆ. ಈ ಕಂಪೆನಿಗೆ ೧೩ ವರ್ಷಗಳ ಕಾಲ ತೆರಿಗೆ ಪಾವತಿ ಯಿಂದ ರಿಯಾಯಿತಿ ನೀಡಲಾಗು ವುದು ಎಂದು ರಾಜ್ಯ ಗೃಹ ಸಚಿವ ಡಾ.ವಿ.ಎಸ್.ಆಚಾರ್ಯ ತಿಳಿಸಿದ್ದಾರೆ.ಚಿಟ್ಪಾಡಿಯ ಸೈಂಟ್ ಮೇರಿಸ್ ಕೈಗಾರಿಕಾ ತರಬೇತಿ ಕೇಂದ್ರದ ಬೆಳ್ಳಿಹಬ್ಬವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು. ರಾಜ್ಯದಲ್ಲಿ ೧೪೬ ಐಟಿ‌ಐ ಸಂಸ್ಥೆಗಳಿಗೆ ಅನುದಾನ ನೀಡುವ ಪ್ರಸ್ತಾಪ ಸರಕಾರದ ಮುಂದಿದೆ. ರಾಜ್ಯ ಸರಕಾರ ಒಟ್ಟು ಶಿಕ್ಷಣಕ್ಕಾಗಿ ೯ಸಾವಿರ ಕೋಟಿ ರೂ. ವ್ಯಯ ಮಾಡುತ್ತಿದೆ ಎಂದು ಅವರು ಹೇಳಿದರು.ಅಧ್ಯಕ್ಷತೆಯನ್ನು ಮಂಗಳೂರು ಕೆಥೊಲಿಕ್ ವಿದ್ಯಾಮಂಡಳಿಯ ಕಾರ್ಯದರ್ಶಿ ವಿಲ್ಸನ್ ವೈಟಸ್ ಡಿಸೋಜ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಕೆ.ರಘುಪತಿ ಭಟ್, ಉಡುಪಿ ಬಿಲ್ಡರ‍್ಸ್ ಅಸೋಸಿಯೇಶನ್‌ನ ಅಧ್ಯಕ್ಷ ಜೆರ್ರಿ ವಿನ್ಸೆಂಟ್ ಡಯಾಸ್, ಉಡುಪಿ ಜಿಲ್ಲಾ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯ ಜಗದೀಶ್, ನಗರಸಭಾ ಸದಸ್ಯೆ Uತಾ ಶೇಟ್, ಅರ್ವಿನ್ ಆಳ್ವ ಉಪಸ್ಥಿತರಿದ್ದರು.ಕೇಂದ್ರದ ಸಂಚಾಲಕ ರೆ.ಫಾ. ಮ್ಯಾಥ್ಯೂ ವಾಝ್ ಸ್ವಾಗತಿಸಿದರು. ಪ್ರಾಚಾರ್ಯ ಗಿಲ್ಬರ್ಟ್ ಬ್ರೆಗಂಝಾ ವರದಿ ವಾಚಿಸಿದರು. ಸುರೇಶ್ ಶೆಟ್ಟಿಗಾರ್ ಕಾರ್ಯಕ್ರಮ ನಿರೂಪಿಸಿದರು(News: Gulfkannadiga)

No comments: