Tuesday, June 2, 2009

ಓದುಗರೊಬ್ಬರ ಪತ್ರ...


ಆಸ್ಟ್ರೇಲಿಯದಲ್ಲಿ ಕಲಿಯಲು /ವಿದ್ಯಾಭ್ಯಾಸಕ್ಕೆ ಹೋದ ಭಾರತೀಯರ ಮೇಲೆ ಹಲ್ಲೆ ನಡೆಯುವಾಗ ನಮ್ಮ "ಮಾನವ ಹಕ್ಕು" ಪ್ರತಿಪಾದಕರು ಎಲ್ಲಿದ್ದಾರೆ?
ಎಲ್ಲಿಂದಲೋ ಬಂದು ಸತ್ಯ ಶೋಧನೆ ಮಾಡುವ / ಪಬ್ ಭರೋ ಎನ್ನುವ ರೇಣುಕ ಚೌಧರಿ ತನ್ನ ರಾಜ್ಯದ ಮಕ್ಕಳ ಮೇಲೆ ಆಸ್ಟ್ರೇಲಿಯದಲ್ಲಿ ಹಲ್ಲೆ ಆಗುವಾಗ ಏಕೆ ಬಾಯಿ ಮುಚ್ಚಿ ಕುಳಿತಿದ್ದಾರೆ?
ಮಟಮಟ ಮಧ್ಯಾಹ್ನ ಶಾಲೆ ತಪ್ಪಿಸಿ ಪಬ್ ಗೆ ಹೋದ ವರಿಗೆ ತರಾಟೆಗೆ ತೆಗೆದುಕೊಂಡಾಗ (ಪೆಟ್ಟು ತಿಂದವರು ಇನ್ನೂ ದೂರು ನೀಡಿಲ್ಲ!) ಮೊರಲ್ ಪೋಲಿಸಿಂಗ್ ಎಂದು ರಂಪ ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆರೆದ ಡೋಂಗಿ ಮಾನವ ಹಕ್ಕುಗಳ ಪ್ರತಿಪಾದಕರು, ಪೀತ ಪತ್ರಿಕೆಯ ಮಾಲಕರು ಕೋರ್ಟ್ ಆದೇಶದ ಮೇಲೆ ಬಂಧನವಾದಾಗ/ ಪೊಲೀಸರ ಮೇಲೆ ಪುಂಡರು ಹಲ್ಲೆ ಮಾಡಿದಾಗ ಪೊಲೀಸರು ಕ್ರಮ ಕೈಗೊಂಡರೆ ಗಲಾಟೆ ಎಬ್ಬಿಸುವ Transparency International/ PUCL, ಅನುಮತಿ ಇಲ್ಲದೆ ಸಮುದ್ರ ತೀರದಲ್ಲಿ ಚಾರ್ಲಿ ಚಾಪ್ಲಿನ್ ಪ್ರತಿಮೆ ನಿಲ್ಲಿಸ ಹೊರಟಾಗ ಸ್ಥಳೀಯರ ವಿರೋಧವನ್ನು ಅಪಹಾಸ್ಯ ಮಾಡಿದ ಬುದ್ದಿ ಜೀವಿಗಳು ... ಪ್ರಚಾರಕ್ಕಾಗಿ ಯಾರು ಯಾರಿಗೋ ಚಡ್ಡಿ ಕಳಿಸಿದ ತೆಹೆಲ್ಕಾದ ನಿಶಾ ಸೂಸನ್ ....ಈಗ ಎಲ್ಲಿ?

For some Page 3 newspapers(!), pub attack/moral policing/sending unsolicited undergarments to others/ Charles Chaplin statue in Baindoor become front page news for days together, but attack on Indian Students in Australia is Page 6 news!
(letter by one of the blog readers Satish Kuntikaana, edited)

No comments: