Saturday, November 29, 2008

ಇವರು ಉಗ್ರರ ಪ್ರಚಾರಕರೆ?

ಕನ್ನಡಪ್ರಭದ ಅಪ್ರಬುದ್ಧ ನಡವಳಿಕೆ...

ನೂರಾರು ಜನರ ಸಾವು
"ಕನ್ನಡಪ್ರಭ"ಕ್ಕೆ ಜೋಕಂತೆ

ಉಗ್ರವಾದಿಗಳು ಅತ್ತ ಮುಂಬೈಯಲ್ಲಿ ನೂರಾರು ಜನರನ್ನು ಕೊಲ್ಲುತ್ತಿದ್ದರೆ, ಇತ್ತ ನಮ್ಮ ಕೆಲ ಮಾಧ್ಯಮಮಿತ್ರರು ಸರಕಾರದ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿರುವುದು ಸೋಜಿಗದ ಸಂಗತಿ.
ಇಡೀ ದೇಶವೇ ಯಾಕೆ, ಪ್ರಪಂಚವೇ ಇಂತಹ Urban ಮತ್ತು Economic ಭಯೋತ್ಪಾದನೆಯನ್ನು ಪ್ರಥಮ ಬಾರಿಗೆ ನೋಡುತ್ತಿರುವಾಗ, "ಕನ್ನಡಪ್ರಭ"ದ ನವಂಬರ್ ೨೮ರ ಮುಖಪುಟದಲ್ಲೇ ಪೊಲೀಸರನ್ನು, ಗೃಹಮಂತ್ರಿಗಳ ಹೇಳಿಕೆಗಳನ್ನು "ಮಾಮೂಲಿ ಜೋಕ್ಸ್" ಎಂದು ಹೀಯಾಳಿಸಲಾಗಿದೆ.
ಹೀಗೆಲ್ಲಾ ಸರಕಾರದ ವಿರುದ್ದ ಉದ್ರೇಕಕಾರಿ ವರದಿಗಳನ್ನು ಪ್ರಕಟಿಸುವುದರ ಮೂಲಕ ದೇಶ ದ್ರೋಹಿ ಭಯೋತ್ಪಾದಕರ "ಪ್ರೊಪಗಾಂಡಾ"ವೆಂಬ ಹೊಂಡಕ್ಕೆ ಬೀಳುತ್ತಿರುವ ಅರಿವು ಇವರಿಗೆ ಇದ್ದಂತಿಲ್ಲ. ಜನರು ಮತ್ತು ಸರಕಾರದ ನಡುವೆ ಇಲ್ಲದ ಕಂದಕ ತೋಡಿ ಪರೋಕ್ಷವಾಗಿ ಭಯೋತ್ಪಾದಕರ ಕೆಲಸವನ್ನು ಇಂತಹ ಗಂಭೀರ ಪರಿಸ್ಠಿತಿಯಲ್ಲಿ ಕೆಲ ಮಾಧ್ಯಮಗಳು ಮಾಡುತ್ತಿರುವುದು ಬೇಸರದ ಸಂಗತಿ.
ಸರಕಾರದ ವಿರುದ್ಧ ಜನರನ್ನು ಎತ್ತಿ ಕಟ್ಟಿ ಸಂಶಯದ ವಾತಾರಣವನ್ನುಂಟು ಮಾಡುವುದು ಆಧುನಿಕ ಭಯೋತ್ಪಾದನೆಯ ಇನ್ನೊಂದು ಮುಖ - ಇಂತಹ ಪರಿಸ್ಠಿತಿಯಲ್ಲಿ ಒಂದು ಕಾಲದಲ್ಲಿ ಖಾದ್ರಿ ಶಾಮಣ್ಣನಂತವರ ಧೀಮಂತರ ಸಂಪಾದಕತ್ವ ಹೊಂದಿ, ಕರ್ನಾಟಕದ ನಂಬರ್ ೧ ಪತ್ರಿಕೆಯಾಗಿ ಮರೆದಿದ್ದ "ಕನ್ನಡಪ್ರಭ"ಕ್ಕೆ, ಈಗ ಸರ್ಕ್ಯುಲೇಶನ್ನಿಗಾಗಿ ಪತ್ರಿಕಾ ಧರ್ಮವನ್ನೇ ಮರೆಯುವ ಸನ್ನಿವೇಶ ಬಂದಿರುವುದು ನಿಜಕ್ಕೂ ಕನಿಕರದ ಸಂಗತಿ.
ಇಡೀ ಗೃಹ ಮತ್ತು ಪೊಲೀಸ್ ಇಲಾಖೆಗಳು ಮುಂಬೈ ಭಯೋತ್ಪಾದನೆ ಕುರಿತು ಸಮಾಲೋಚನೆ ನಡೆಸುತ್ತಿರುವಾಗ ಯಾವುದೋ ಆಧಾರವಿಲ್ಲದ ವರದಿ ಪ್ರಕಟಿಸಿ, ಹಿಂದಿನ ದಿನ "ಜೋಕರ್"ಯೆಂದು ತಾವೇ ಹೀಯಾಳಿಸಿದ್ದವರಿಗೆ ಫೋನ್ ಮಾಡಿ ಅಸಂಬದ್ಧ ಪ್ರಶ್ನೆ ಕೇಳಿದರೇನು ಮಾಡಬೇಕು ಸ್ವಾಮಿ?
ಪೋಲಿಸ್ ಬಳಿ ಯಾವ ಉಪಕರಣ ಶಸ್ತ್ರ ಇಲ್ಲ ಎಂದು ಬರೆಯುವ ಇವರು...ಉಪಕರಣ/ ಶಸ್ತ್ರ ಕಂಪೆನಿಗಳ ದಲ್ಲಾಳಿಗಳೇ? ಅಲ್ಲದೆ ನಮ್ಮ ಬಳಿ ಯಾವ್ಯಾವ ಶಸ್ತ್ರ / ತಂತ್ರಗಳು ಇವೆ ಎಂದು ನಾವೇಕೆ ಬಾಯಿ ಬಿಡಬೇಕು? (ಉಗ್ರರಿಗೆ ಮಾಹಿತಿ ರವಾನೆ ಏಕೆ ಮಾಡಬೇಕು?)

ಇದೇ ಪತ್ರಿಕೆ ರಾಜ್ಯದ ಭಯೋತ್ಪಾದಕರಾದ ನಕ್ಸಲರನ್ನೂ ಪರೋಕ್ಷವಾಗಿ ಬೆಂಬಲಿಸುವಂತಹ ವರದಿಗಳನ್ನು ಪ್ರಕಟಿಸಿ ಪೊಲೀಸ್ ಪಡೆಗಳ ಧೈರ್ಯ ಕುಂದಿಸುವ ಕೆಲಸವನ್ನೂ ಮಾಡಿರುವುದು ಜನರು ಗಮನಿಸಿದ್ದಾರೆ.

5 comments:

Anonymous said...

NALIGE KULAVANNU HELUTTADANTE....

Anonymous said...

They have done right man!. Persons like you shoul be expose to the society. You bloody hell, you don't care about paying our police/security department properly and you claim that the media people are doing wrong?.

We thought that BJP govt. will save this country from Terrorism, apparently NOT!. Shame Acharya.
You are fit for giving speaches in the vicinity of Swamijis. [I am sure you don't publish this!].

Anonymous said...

It is no secret that many of the high profile journalists have interests in arms business.

But Kannadaprabha, a collapsing institution which does not even pay their own employees on time should be the last newspaper concerned about salary paymnet of cops.

Ministers make policy decisions and not day to day chores like finding out if someone got salary or not.

There are administrative officers who can answer such questions, so it is not right on part of Kannadaprabha to disturb minister when they are busy cleaning up 60 years of mess.

Santy said...

I am glad to know that you have approved the second message,by giving a chance to people to xpress their vision/ideas/concerns.
Appreciate it.

I feel kannadaprabha has done its duty,they did correct.but whatever police officers will make statement they should re-think and then make it.

Anonymous said...

Mr. acharya should not take it as a personal attack by kannada prabha. this is a daring newspaper which only reflected the feelings of people against the home minister and the police commissioner. the name of acharya or bidri is only incidental. the name would have been different if home minister and the commisioner were to be different. today no public believe any kind of assurances by any politician or police officer with respect to security arrangements. most of the public and also i feel that any such "state wide kattechchara" means only a joke! please don't feel bad.