Saturday, November 15, 2008

ಕೃಷ್ಣನ ನೆಲೆವೀಡಾದ ಉಡುಪಿಯಲ್ಲಿ ಸಂಭ್ರಮದ ಕನಕ ಜಯಂತಿ

ಭಾವುಕ ಭಕ್ತರಿಂದ ಕನಕ ಗೋಪುರದ ಮುಂದೆ ಭಜನೆ...
ವಿ ಎಸ್ ಆಚಾರ್ಯರಿಂದ ಕನಕ ಮಹೋತ್ಸವಕ್ಕೆ ಚಾಲನೆ...
ಕನಕ ಮಂಟಪದಲ್ಲಿ...
ಭಕ್ತಾದಿಗಳಿಂದ ಮೆರವಣಿಗೆ...
ಕನಕನ ಕಿಂಡಿಯಿಂದ ಕೃಷ್ಣ ದರ್ಶನ...
ರಥ ಬೀದಿಯಲ್ಲಿ ಗಣ್ಯರು...ಪುತ್ತಿಗೆ ಶ್ರೀ ಸುಗುಣೇಂದ್ರ ಶ್ರೀಪಾದರೊಂದಿಗೆ...
(photos by Janardan Kodavoor)
ಉಡುಪಿ:ನ,15. ಕನಕದಾಸರ ಕುರಿತ ಅಧ್ಯಯನಕ್ಕೆ ಸರಕಾರ ಹೆಚ್ಚಿನ ಒತ್ತು ನೀಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಗೃಹಮಂತ್ರಿ ಡಾ. ವಿ. ಎಸ್. ಆಚಾರ್ಯ ಹೇಳಿದರು.
ಶನಿವಾರ ಉಡುಪಿ ಜಿಲ್ಲಾಡಳಿತ, ಪರ್ಯಾಯ ಪುತ್ತಿಗೆ ಶ್ರೀಕೃಷ್ಣಮಠ ಹಾಗೂ ಕನಕದಾಸ ಅಧ್ಯಯನ ಸಂಶೋಧನ ಕೇಂದ್ರ ಸಂಯುಕ್ತವಾಗಿ ಇಲ್ಲಿನ ರಾಜಾಂಗಣದಲ್ಲಿ ಹಮ್ಮಿಕೊಂಡಿದ್ದ ಕನಕ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.
ಹರಿದಾಸಶ್ರೇಷ್ಠರಾದ ಕನಕದಾಸರದು ಮೇರು ವ್ಯಕ್ತಿತ್ವ. ಆದರೆ, ಅವರ ಕುರಿತಾಗಿ ಹೆಚ್ಚಿನ ವಿಚಾರಗಳು ಲಭ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಉಡುಪಿಯಲ್ಲಿ ಆರಂಭಿಸಲಾಗುವ ಕನಕದಾಸ ಅಧ್ಯಯನಸಂಶೋಧನ ಕೇಂದ್ರದ ಮೂಲಕ ಕನಕದಾಸರ ಸಮಗ್ರ ಅಧ್ಯಯನ ನಡೆಸಲಾಗುವುದು. ಜನಪದೀಯ ಶೈಲಿಯಲಲ್ಲಿ ಕನಕದಾಸರ ಜಯಂತಿಯನ್ನು ಇನ್ನು ಮುಂದಿನ ದಿನಗಳಲ್ಲಿ ಆಚರಿಸಲಾಗುವುದು ಎಂದ ಸಚಿವ ಆಚಾರ್‍ಯ, ಕನಕದಾಸ ವಿರಚಿತ ಕೀರ್ತನೆಗಳನ್ನು ಜನಮಾನಸಕ್ಕೆ ತಲುಪಿಸುವ ಕಾರ್‍ಯವನ್ನೂ ಸರಕಾರ ಮಾಡಲಿದೆ ಎಂದರು.
ಕೃಷ್ಣನ ಹೊರತಾಗಿ ಕನಕನಿಲ್ಲ: ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಕನಕದಾಸರದು ಅಪೂರ್ವ ವ್ಯಕ್ತಿತ್ವ. ದಾಸ್ಯತ್ವಕ್ಕೆ ಕನಕದಾಸರು ಉತ್ತಮ ಉದಾಹರಣೆ. ಭಗವಂತನನ್ನು ಒಲಿಸಿಕೊಳ್ಳಲು ಅಹಂಕಾರ ತ್ಯಜಿಸಿ ದಾಸ್ಯತ್ವವನ್ನು ಸ್ವೀಕರಿಸಬೇಕೆಂದು ಸಾರಿದ ಕನಕದಾಸರು ತನ್ನನ್ನು ತಾನೇ ದಾಸಾನಿದಾಸ ಎಂದು ಹೇಳಿಕೊಂಡಿದ್ದಾರೆ.
ಕೃಷ್ಣನನ್ನು ಹೊರತುಪಡಿಸಿ ಕನಕದಾಸರಿಲ್ಲ. ಆದ್ದರಿಂದ ಕೃಷ್ಣನಿಗೆ ಸಲ್ಲಿಸುವ ಪೂಜೆ ಕನಕದಾಸರಿಗೆ ಸಮರ್ಪಣೆಯಾಗುತ್ತದೆ. ಕನಕ ಪೂಜೆ ಕೃಷ್ಣ ಪೂಜೆಯ ಭಾಗ ಎಂದೇ ಪರಿಗಣಿಸಲ್ಪಡುತ್ತದೆ. ಉಡುಪಿಯಲ್ಲಿ ಕನಕದಾಸರಿಗೆ ಈ ಹಿಂದಿನಿಂದಲೂ ಗೌರವ ಸಲ್ಲಿಸಲಾಗುತ್ತಿದೆ. ಕನಕದಾಸರು ಕೃಷ್ಣನಿಗೆ ಗಂಜಿ ಸಲ್ಲಿಸಿದ ಕುರುಹಾಗಿ ಇಂದಿಗೂ ಕೃಷ್ಣನಿಗೆ ಚಿಪ್ಪು (ಗೆರಟೆ)ನಲ್ಲಿ ಗಂಜಿ ಸಮರ್ಪಿಸಲಾಗುತ್ತಿದೆ ಎಂದರು. ಭೀಮನಕಟ್ಟೆ ಶ್ರೀ ರಘೂತ್ತಮತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಬನ್ನಂಜೆ ಗೋವಿಂದಾಚಾರ್ಯ ವಿರಚಿತ ಕನಕೋಪನಿಷತ್ತು ಗ್ರಂಥವನ್ನು ಪರ್ಯಾಯ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಅನಾವರಣಗೊಳಿಸಿದರು. ನಗರಸಭಾಧ್ಯಕ್ಷ ದಿನಕರ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸುಧಾಕರ ಶೆಟ್ಟಿ, ಜಿಲ್ಲಾಧಿಕಾರಿ ಹೇಮಲತಾ, ಜಿ. ಪಂ. ಸಿ‌ಇ‌ಓ ಪ್ರಸನ್ನಕುಮಾರ್ ಮೊದಲಾದವರಿದ್ದರು.
ಕನಕದಾಸ ಅಧ್ಯಯನ ಸಂಶೋಧನ ಕೇಂದ್ರದ ಮುಖ್ಯಸ್ಥ ಪ್ರೊ. ಹೆರಂಜೆ ಕೃಷ್ಣ ಭಟ್ ಸ್ವಾಗತಿಸಿದರು. ಶಾಸಕ ರಘುಪತಿ ಭಟ್ ಪ್ರಸ್ತಾವನೆಗೈದರು. ಚಂದ್ರಶೇಖರ ಕೆದಿಲಾಯ ಪ್ರಾರ್ಥಿಸಿದರು. ಆರ್ ಟಿ ‌ಓ ಓಂಕಾರೇಶ್ವರಿ ವಂದಿಸಿದರು.
ಮು೦ಜಾನೆ 9.15ಕ್ಕೆ ವಿವಿಧ ಭಜನಾ ಮ೦ಡಳಿಗಳಿ೦ದ ದಾಸ ಕೀರ್ತನಾ ಭಜನೆ ನಡೆಯಿತಲ್ಲದೇ ರಥಬೀದಿಯಲ್ಲಿ ವಿಷಯ ಮೆರವಣಿಗೆ ನಡೆಸಲಾಯಿತು. ನ೦ತರ ಪರ್ಯಾಯ ಶ್ರೀಪುತ್ತಿಗೆ ಮಠಾಧೀಶರು ಹಾಗೂ ಜಿಲ್ಲಾಧಿಕಾರಿಗಳು, ಸಚಿವರು ಸೇರಿದ೦ತೆ ನಗರ ಸಭೆಯ ಅಧ್ಯಕ್ಷರು, ನಗರಾಭಿವ್ರದ್ದಿ ಪ್ರಾಧಿಕಾರದ ಅಧ್ಯಕ್ಷರು ಸೇರಿದ೦ತೆ ಇತರ ಗಣ್ಯರು ಕನಕದಾಸರ ಭಾವಚಿತ್ರಕ್ಕೆ ಹಾಗೂ ವಿಗ್ರಹಕ್ಕೆ ಪುಷ್ಪ ವ್ರಷ್ಠಿಯನ್ನು ಸಲ್ಲಿಸಿ ಹೂ ಹಾರವನ್ನು ಹಾಕಿದರು.
(ಕನ್ನಡ ವರದಿ ಜೆ ಪಿ ; ಗಲ್ಫ್ ಕನ್ನಡಿಗ)
(more phootoos and inglish ripoort in http://www.daijiworld.com/news/news_disp.asp?n_id=53621&n_tit=Udupi%3A+Kanakadasa+Jayanti+Celebrated)
Udupi, Nov 15: The Kanakadasa birth anniversary celebrations were held at the Rajangana of the Krishna Math here on Saturday November 15, under the aegis of the district administration, Parayaya Puttige Math and Kanakadasa Studies and Research Centre.
The function was inaugurated by the district-in-charge minister Dr V S Acharya. In his inaugural address, he called upon the scholars of the folk and Haridasa literatures to come together and conduct deep study about the life and preachings of Kanakadasa. He also assured, that the state government is prepared to santion additional grants if necessary, towards the said work, if the amount of a crore of rupees already earmarked for the purpose, is found to be inadequate. He opined, that learning about and emulating the principles for which the great personalities stood, results in the overall welfare of the present generation. He also advised the concerned, to not only study about Kanakadasa but also spread his principles, literature and preaching all over the state. Puttige Math swamiji Sugunendrateerta delivered benedictory speech. Swamiji Raghumanyateerta of Bheemanakatte Math was present.
The programme was presided by local MLA Raghupati Bhat. District deputy commissioner Hemalata, taluk panchayat president Geetha J Prabhu, town municipal president Dinkar Shetty, Udupi Urban Development Authority chairman Sudhakar Shetty, zilla panchayat chief executive officer Prasanna Kumar, Kaup Kurubara Sangh president Sadanand etc., were present.
On this occasion, 'Kanakopanishat,' a work on Kanakadasa written by Bananje Govindacharya, was released by Dr V S Acharya.
Mangalore University Kannada reader Dr B Shivaram Shetty delivered a special lecture on Kanakadasa.
Earlier, in tune with the impetus laid by Kanakadasa on devotion, Bhajan teams came in a procession through the car street here, chanting Bhajans.
Various competitions were held for the students on the occasion.
Local regional transport officer M P Omkareshwari welcomed the guests and the gathering. Director of Kanakadasa Studies and Research Centre H Krishna Bhat delivered introductory address. Suma and Gopalacharya presented the programme.
==========================

No comments: