Saturday, August 2, 2008

ಮುಖ್ಯಮಂತ್ರಿ ಯಡ್ಯುರಪ್ಪನವರಿಗೆ ಉಡುಪಿಯಲ್ಲಿ ಹಾರ್ದಿಕ ಸ್ವಾಗತ..

ಮಂಗಳೂರು ವಿಮಾನ ನಿಲ್ದಾಣ ಟರ್ಮಿನಲ್ ಕಾಮಗಾರಿ ವೀಕ್ಷಣೆ...
ಡಾ ವೀರೇಂದ್ರ ಹೆಗ್ಗಡೆ, ಸದಾನಂದ ಗೌಡ, ಡಾ ವಿ ಎಸ್ ಆಚಾರ್ಯ ಮುಖ್ಯ ಮಂತ್ರಿಗಳೊಂದಿಗೆ ಕುಶಲೋಪರಿ...


ಮುಖ್ಯಮಂತ್ರಿ ಶ್ರೀ ಯಡ್ಯುರಪ್ಪ ಉಡುಪಿಯಲ್ಲಿ ...
ಹಾರ್ದಿಕ ಸ್ವಾಗತ ಕೋರುತ್ತಿರುವ ಉಡುಪಿಯ ಗಣ್ಯರು...
ಶ್ರೀ ಯಡ್ಯುರಪ್ಪ ಮತ್ತು ಡಾ ವಿ ಎಸ್ ಆಚಾರ್ಯ
(ಜತೆಯಲ್ಲಿ ಪಕ್ಷದ ಕಾರ್ಯಕರ್ತರು)

ಸ್ನೇಹಮಯಿ ಮುಖ್ಯಮಂತ್ರಿ, ಹಿತೈಶಿಗಳೊಂದಿಗೆ...
(ಚಿತ್ರ ಕೃಪೆ: ಜನಾರ್ದನ ಕೊಡವೂರು, http://www.managlorean.com/ , http://www.daijiworld.com/ )
ರಾಜ್ಯದ ಅಭಿವೃದ್ಧಿ ಚಿತ್ರಣವನ್ನು ಪ್ರತಿ ನೂರು ದಿನಗಳಿಗೊಮ್ಮೆ ಜನತೆಯ ಮುಂದಿಡಲು ತೀರ್ಮಾನಿಸಿದ್ದು ಈ ನಿಟ್ಟಿನಲ್ಲಿ ಪ್ರತಿ ತಿಂಗಳು ಕನಿಷ್ಠ 3 ಜಿಲ್ಲೆಗಳ ಪ್ರಗತಿ ಪರಿಶೀಲನೆಯನ್ನು ಖುದ್ದಾಗಿ ತಾವೇ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ರಾತ್ರಿ ಇಲ್ಲಿ ಪ್ರಕಟಿಸಿದರು.
ಬಜಪೆ (ಮಂಗಳೂರು): ಶ್ರೀಕ್ಷೇತ್ರ ಕ್ಲೊಲೂರಿಗೆ ತೆರಳುವ ಮಾರ್ಗ ಮಧ್ಯೆ ಇಲ್ಲಿಯ ಬಜಪೆ ವಿಮಾನ ನಿಲ್ದಾಣದಲ್ಲಿ ಸ್ದುದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಮಾದರಿಯಲ್ಲೆ ರಾಜ್ಯದ ಎಲ್ಲ ಮಹಾನಗರ ಪಾಲಿಕೆ ವ್ಯಾಪ್ತಿಯ ನಗರಗಳ ಸಮಗ್ರ ಅಭಿವೃದ್ಧಿಗೆ ಬಜೆಟ್‌ನಲ್ಲಿ ವಿಶೇಷ ಅನುದಾನ ಕಲ್ಪಿಸಲಾಗಿದೆ ಎಂದರು.
ಜಿಲ್ಲಾಧಿಕಾರಿಗಳ ಹಾಗೂ ಜಿಪಂ ಸಿ‌ಇ‌ಒಗಳ ಸಭೆಯೊಂದನ್ನು ಬೆಂಗಳೂರಿನಲ್ಲಿ ಶನಿವಾರ ಬೆಳಿಗ್ಗೆಯಷ್ಟೆ ನಡೆಸಿದ್ದು ಪ್ರತಿ ಮೂರು ತಿಂಗಳಿಗೊಮ್ಮೆ ಇಂತಹ ಸಭೆ ನಡೆಸಲಾಗುವುದು ಎಂದು ತಿಳಿಸಿದರು.
ಮಳೆ ಬಂತು, ತೀರ್ಥಕ್ಷೇತ್ರಕ್ಕೆ ಹೊರಟಿರುವೆ
ಕೊಲ್ಲೂರಿಗೆ ತೆರಳಲು ಸಚಿವರ ತಂಡದೊಂದಿಗೆ ಬಂದಿಳಿದ ಯಡಿಯೂರಪ್ಪ ತಮ್ಮ ಪ್ರವಾಸದ ಉದೇಶವನ್ನು ಪತ್ರಿಕಾಗೋಷ್ಠಿಯಲ್ಲಿ ವಿವರಿಸ್ದಿದು ಹೀಗೆ. ‘ನಾವು ಅಧಿಕಾರಕ್ಕೆ ಬಂದ ಕಳೆದ ತಿಂಗಳು ರಾಜ್ಯದಲ್ಲಿ ಪರಿಸ್ಥಿತಿ ಭಯಾನಕವಾಗಿತ್ತು. ಮಳೆ ಇಲ್ಲದೆ ಬರದ ಭೀತಿ ಇತ್ತು. ಆದರೆ ಆ ವರುಣದೇವ ಕಣ್ಣು ತೆರೆದ. ಹಾಗಾಗಿ ನಾವೀಗ ಪುಣ್ಯಕ್ಷೇತ್ರಗಳಿಗೆ ಹೊರಟಿದ್ದೇವೆ’ ಎಂದರು.
ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏರ್ ಸ್ಟ್ರಿಪ್ಸ್ ಸ್ಥಾಪನೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದ್ದು ಈಗಾಗಲೆ ಅನೇಕ ಕಡೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿದೆ. ಭೂಸ್ವಾಧೀನ ಕಾಮಗಾರಿ ಚುರುಕುಗೊಳಿಸಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದು ಬರುವ ಎರಡು ವರ್ಷಗಳಲ್ಲಿ ಎಲ್ಲ ಕಡೆ ಏರ್ ಸ್ಟ್ರಿಪ್ಸ್ ಅಸ್ತಿತ್ವಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು.
ಅಭಿವೃದ್ಧಿಯಲ್ಲಿ ಈಗ ನಮ್ಮ ರಾಜ್ಯ 7 ನೇ ಸ್ಥಾನದಲ್ಲಿದ್ದು ಬರುವ ಮೂರ್‍ನಾಲ್ಕು ವರ್ಷಗಳಲ್ಲಿ ಅಗ್ರಸ್ಥಾನಕ್ಕೆ ತಲುಪಿ ಚಿತ್ರಣವೇ ಬದಲಾಗಲಿದೆ. ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಿದ್ದು ಮಾದರಿ ರಾಜ್ಯ ಮಾಡುವ ಸಂಕಲ್ಪ ತಮ್ಮದು ಎಂದು ಯಡಿಯೂರಪ್ಪ ಘೋಷಿಸಿದರು.
ಸಚಿವರಾದ ವಿ.ಎಸ್. ಆಚಾರ್ಯ, ಶೋಭಾ ಕರಂದ್ಲಾಜೆ, ರಾಮಚಂದ್ರ ಗೌಡ, ಕೃಷ್ಣ ಪಾಲೇಮಾರ್, ಎಸ್.ಎನ್. ಕೃಷ್ಣಯ್ಯ ಶೆಟ್ಟಿ, ಸಂಸದ ಡಿ.ವಿ. ಸದಾನಂದಗೌಡ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಜಿಲ್ಲೆಯ ಶಾಸಕರುಗಳು, ಮಾಜಿ ಶಾಸಕರುಗಳು, ವಿವಿಧ ಮುಖಂಡರು ಹೆಚ್ಚಿನ ಸಂಖ್ಯೆಯ್ಲಲಿ ಹಾಜರಿದ್ದು ಮುಖ್ಯಮಂತ್ರಿಯಾಗಿ ಇದೇ ಮೊದಲ ಬಾರಿಗೆ ಮಂಗಳೂರಿಗೆ ಭೇಟಿ ನೀಡಿದ ಯಡಿಯೂರಪ್ಪ ಅವರನ್ನು ಸ್ವಾಗತಿಸಿದರು (ವರದಿ : http://www.gulfkannadiga.com/news-11933.html)

No comments: